ಶಿವ 143 ಎಂಬುದು ಅನಿಲ್ ಕುಮಾರ್ ನಿರ್ದೇಶನದ 2022 ರ ಕನ್ನಡ ಭಾಷೆಯ ಕಥಾಚಿತ್ರವಾಗಿದೆ. ಚಿತ್ರದಲ್ಲಿ ಧೀರೇನ್ ರಾಮ್‌ಕುಮಾರ್ ಮತ್ತು ಮಾನ್ವಿತಾ ಕಾಮತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ, ಭೋಗೇಂದ್ರ ಮತ್ತು ಡಾ.ಸೂರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಮುಖ್ಯವಾಗಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಶಿವ 143 ಚಿತ್ರವು ತೆಲುಗು ಬ್ಲಾಕ್‌ಬಸ್ಟರ್ ಚಲನಚಿತ್ರ 100 ನ ಅಧಿಕೃತ ರಿಮೇಕ್ ಆಗಿದೆ. == ಪಾತ್ರವರ್ಗ == ಶಿವನಾಗಿ ಧೀರೇನ್ ರಾಮ್‌ಕುಮಾರ್ ಮಾನ್ವಿತಾ ಕಾಮತ್ ಮಧು ಪಾತ್ರದಲ್ಲಿ ಚರಣರಾಜ್ ಅವಿನಾಶ್ ಶೋಬರಾಜ್ ಚಿಕ್ಕಣ್ಣ ಬಾಲ ರಾಜವಾಡಿ ಸಾಧು ಕೋಕಿಲ ಪುನೀತ್ ರುದ್ರನಾಗ್ == ಬಿಡುಗಡೆ == ಚಲನಚಿತ್ರವು 13 ಮೇ 2022 ರಂದು ಬಿಡುಗಡೆಯಾಯಿತು. == ಉಲ್ಲೇಖಗಳು ==